ವಿಜಮುರಿ ಸೀತಾ ದೇವಿ (ಮರಣ ೧೭ ಮೇ ೨೦೧೬) ಒಬ್ಬ ಸಂಗೀತಗಾರ್ತಿ, ಗಾಯಕಿ ಮತ್ತು ತೆಲುಗು ಜಾನಪದ ಸಂಗೀತದ ವಿದ್ವಾಂಸರು. == ಜೀವನ == ದೇವಿ ಅವರು ಆಲ್ ಇಂಡಿಯಾ ರೇಡಿಯೊದಲ್ಲಿ ಜಾನಪದ ಸಂಗೀತದ ನಿರ್ಮಾಪಕರಾಗಿದ್ದರು. ಅವರ ಸಹೋದರಿ ವಿಂಜಮುರಿ ಅನಸೂಯಾ ದೇವಿ ಜೊತೆಗೆ ಅವರು ಆಂಧ್ರಪ್ರದೇಶದ ಅನೇಕ ಪ್ರಸಿದ್ಧ ಕವಿಗಳ ರಚನೆಗೆಳಿಗೆ ಸಂಗೀತ ಸಂಯೋಜಿಸಿದ್ದಾರೆ. ಇವರಲ್ಲಿ ಶ್ರೀರಂಗಂ ಶ್ರೀನಿವೀಸಾ ರಾವ್ ( ಶ್ರೀ ಶ್ರೀ ) ಕೂಡ ಒಬ್ಬರು. ಅವರು ೧೯೭೯ ರ ಚಲನಚಿತ್ರ ಮಾ ಭೂಮಿಗೆ ಅವರು ಸಂಗೀತವನ್ನು ನೀಡಿದರು. ಅವರು "ಆಂಧ್ರಪ್ರದೇಶದ ಜಾನಪದ ಸಂಗೀತ" ಬರೆದರು. ಅವರು ೧೭ ಮೇ ೨೦೧೬ ರಂದು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದಲ್ಲಿ ನಿಧನರಾದರು. == ಉಲ್ಲೇಖಗಳು ==